ಕರ್ನಾಟಕ ರಾಜ್ಯ ಹಜ್ ಸಮಿತಿಗೆ ಸ್ವಾಗತ
ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧಿಕೃತ ಜಾಲತಾಣಕ್ಕೆ ಸ್ವಾಗತ. ಕರ್ನಾಟಕ ರಾಜ್ಯ ಹಜ್ ಸಮಿತಿಯ ವತಿಯಿಂದ ಹಜ್ ಯಾತ್ರೆಯನ್ನು ನಿರ್ವಹಿಸಲು ಹಜ್ ಸಮಿತಿಯು ಯಾವ ಯಾವ ರೀತಿಯ ಸೌಕರ್ಯಗಳನ್ನು ಒದಗಿಸುತ್ತದೆ ಹಾಗೂ ಆ ಸೇವೆಯ ಪ್ರಯೋಜನವನ್ನು ಅತ್ಯುತ್ತಮವಾದ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಸಿಬ್ಬಂದಿಯು ಸದಾ ಜಾಗೃತವಾಗಿರುತ್ತದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇವೆ.
ಇಸ್ಲಾಂ ಧರ್ಮದ ಪಂಚ ಆದ್ಯ ಕರ್ತವ್ಯಗಳಲ್ಲಿ ಹಜ್ ಯಾತ್ರೆ ಕೈಗೊಳ್ಳುವುದು ಅತ್ಯಂತ ಪ್ರಮುಖವಾದ ಕರ್ತವ್ಯವಾಗಿರುತ್ರತದೆ. ಪ್ರತಿಯೊಬ್ಬ ಮುಸ್ಲಿಂ ಭಕ್ತಾಧಿಯು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಸಹ ಹಜ್ ಯಾತ್ರೆಯನ್ನು ಕೈಗೊಳ್ಳುವ ಅಭಿಲಾμÉಯನ್ನು ಹೊಂದಿರುತ್ತಾರೆ. ಆರ್ಥಿಕವಾಗಿ ಸದೃಢವುಳ್ಳ ಹಾಗೂ ಪ್ರಬುದ್ಧ ಮುಸ್ಲಿಂ ವ್ಯಕ್ತಿಯು ಹಜ್ ಯಾತ್ರೆ ಕೈಗೊಳ್ಳುವುದು ಕಡ್ಡಾಯಗೊಳಿಸಲಾಗಿರುತ್ತದೆ. ಇಸ್ಲಾಂ ಧರ್ಮದ ದಿವ್ಯ 5 ಆಚರಣೆಗಳಲ್ಲಿ ಹಜ್ ಯಾತ್ರೆಯು ಅತ್ಯಂತ ಪ್ರಮುಖವಾಗಿರುವುದರಿಂದ ಸಬಲರಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಕಾರ್ಯವನ್ನು ತಪ್ಪದೆ ನಿರ್ವಹಿಸುವಂತೆ ತಿಳಿಸಲಾಗಿದೆ.
ಪ್ರವಾದಿ ಮೊಹಮ್ಮದ್(SಂWS) ಪೈಗಂಬರ್ ರವರ ಜೀವನದರ್ಶನಕ್ಕೆ ಹೊಂದಿಕೊಂಡಿರುವಂತಹ ಈ ಹಜ್ ಯಾತ್ರೆಯ ಹಿನ್ನೆಲೆಯು ಪವಿತ್ರ ಯಾತ್ರಾ ಸ್ಥಳಗಳಾದ ಮಕ್ಕಾ-ಮದೀನ ನಗರಗಳ ದರ್ಶನ ಪಡೆಯುವ ಸತ್‍ಸಂಪ್ರದಾಯವು ಅತ್ಯಂತ ಪುರಾತನವಾಗಿದ್ದು, ಇಸ್ಲಾಂ ಮತ್ತು ಜುಡಾ¬[ುಸಂನ ಅನುಯಾಯಿಗಳಾದ ಹಜರತ್ ಇಬ್ರಾಹಿಂ ಮತ್ತು ಹಜರತ್ ಇಸ್ಮಾಯಿಲ್ ಪ್ರವಾದಿವರ್ಯರ ಕಾಲದಿಂದಲೂ ಈ ಪುಣ್ಯ ಕ್ಷೇತ್ರಗಳ ದರ್ಶನವನ್ನು ಪಡೆಯುವ ಆಚರಣೆಯನ್ನು ನಡೆಸಿಕೊಂಡು ಬಂದಿರುತ್ತಾರೆ ಎಂಬುದನ್ನು ತಿಳಿಸಲು ಹೆಮ್ಮೆಯೆನಿಸುತ್ತದೆ.