ಕರ್ನಾಟಕರಾಜ್ಯ ಹಜ್ ಸಮಿತಿಯ ಒಂದು ಕಿರುನೋಟ

ಕರ್ನಾಟಕ ರಾಜ್ಯ ಹಜ್ ಸಮಿತಿಯು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹಜ್ ಸಮಿತಿ ಕಾಯ್ದೆ-2002 ರನ್ವಯ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ಅಧೀನದಲ್ಲಿ ಭಾರತೀಯ ಹಜ್ ಸಮಿತಿ, ಮುಂಬೈ ಇದರ ಮುಖಾಂತರ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಛೇರಿಯು ನಂ.84/ಎ, ರಿಚ್‍ಮಂಡ್ ರಸ್ತೆ, ಬೆಂಗಳೂರು-560 025 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ದೂರವಾಣಿ ಸಂಖ್ಯೆ: 080-22244434, ವೆಬ್ ಜಾಲತಾಣ : ತಿತಿತಿ.ಞಚಿಡಿhಚಿರಿ.iಟಿ ಮತ್ತು ಇಮೇಲ್ : iಟಿಜಿo@ಞಚಿಡಿhಚಿರಿ.iಟಿ ಆಗಿರುತ್ತದೆ.

ಮೊಟ್ಟಮೊದಲು ಕರ್ನಾಟಕ ರಾಜ್ಯ ಹಜ್ ಸಮಿತಿಯನ್ನು ಸರ್ಕಾರಿ ಆದೇಶ ಸಂಖ್ಯೆ: ಆರ್‍ಡಿ 01 ಕೆಹೆಚ್‍ಜೆ 65 ದಿ:5-08-1965 ರಲ್ಲಿ 3 ವರ್ಷಗಳ ಅವಧಿಗೆ ರಚಿಸಲಾಯಿತು. ಈ ಸಮಿತಿಯನ್ನು 8 ಸದಸ್ಯರನ್ನೊಳಗೊಂಡಿದ್ದು, ಶ್ರೀ.ಹೆಚ್.ಆರ್. ಅಬ್ದುಲ್ ಗಫಾರ್ , ಮಾಜಿ ಹಣಕಾಸು ಮತ್ತು ವಕ್ಫ್ ಉಪ ಸಚಿವರು ಸಮಿತಿಯ ಅಧ್ಯಕ್ಷರಾಗಿ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ ರವರು ಕಾರ್ಯದರ್ಶಿಯಾಗಿ ಮಾಡಲಾಗಿತ್ತು. ತದನಂತರ ಈ ಸಮಿತಿಯು ಪ್ರತಿ 3 ವರ್ಷಗಳಿಗೊಮ್ಮೆ ಪುನರ್ ರಚನೆಗೊಂಡಿತು. ಹಜ್ ಸಮಿತಿಯ ಕಾಯ್ದೆ-2002 ಜಾರಿಗೆ ಬಂದನಂತರ ಕರ್ನಾಟಕ ಸರ್ಕಾರವು ಈ ಕಾಯ್ದೆ-2002ರ ಸೆಕ್ಷನ್(47) ರಡಿ ಕರ್ನಾಟಕ ರಾಜ್ಯ ಹಜ್ ಸಮಿತಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಸಕಇ 55 ಡಬ್ಲೂಹೆಚ್‍ಜೆ.2012 ದಿನಾಂಕ: 16-07-2012/14-8-2012 ರಲ್ಲಿ 15 ಸದಸ್ಯರುಗಳೊಂದಿಗೆ ಪುನರ್ ರಚಿಸಲಾಯಿತು. ಶ್ರೀ.ಮೊಹಮ್ಮದ್ ಮರ್ಗೂಬ್ ಅಹಮದ್ ರವರು ಈ ಸದಸ್ಯರುಗಳ ಪೈಕಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಕರ್ನಾಟಕ ರಾಜ್ಯ ಹಜ್ ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳು :

ಕರ್ನಾಟಕ ರಾಜ್ಯ ಹಜ್ ಸಮಿತಿಯು ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳ ಮತ್ತು ಕೇಂದ್ರೀಯ ಹಜ್ ಸಮಿತಿ, ಮುಂಬೈ ಇವರ ನಡುವಣ ಸಲಹೆ ಮತ್ತು ಉತ್ತಮ ಸಮನ್ವಯ ಸಾಧಿಸುವ ಸಮಿತಿಯಾಗಿ ಹಾಗೂ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ರಾಜ್ಯ ಹಜ್ ಸಮಿತಿಯು ಹಜ್ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಯಾತ್ರಾರ್ಥಿಗಳಿಗೆ ಅಧಿಕೃತವಾಗಿ ಸರ್ಕಾರದಿಂದ ಒದಗಿಸಬೇಕಾದ ಸಹಕಾರ/ಮಾರ್ಗದರ್ಶನ ಇತ್ಯಾದಿಗಳನ್ನು ನೀಡುವುದು ಪ್ರಮುಖ ಪಾತ್ರವಾಗಿರುತ್ತದೆ. ಸಮಿತಿಯ ಮುಖ್ಯ ಕರ್ತವ್ಯಗಳೇನೆಂದರೆ:-

  • ಹಜ್ ಯಾತ್ರಿಗಳಿಗೆ ಅನುಕೂಲವಾಗುವಂಥಹ ಮಾಹಿತಿಯ್ನು ಪಡೆದು ಪ್ರಚುರಪಡಿಸುವುದು.
  • ಎಲ್ಲಾ ವಿಷಯಗಳಲ್ಲಿ ಹಜ್ ಯಾತ್ರಿಗಳಿಗೆ ವೈದ್ಯಕೀಯ ತಪಾಸಣೆ, ಚುಚ್ಚುಮದ್ದು ಪಡೆಯಲು, ಪಾಸ್ ವಿತರಿಸುವುದು, ಹಣ ಸಂದಾಯ ಮಾಡಲು ಮಾರ್ಗದರ್ಶನ ಹಾಗೂ ಸ್ಥಳೀಯ ಪ್ರಾಧಿಕಾರಗಳಿಂದ ಎಲ್ಲಾ ರೀತಿಯಲ್ಲಿ ಅನುಕೂಲವಾಗುವಂತೆ ಸಮನ್ವಯ ಸಾಧಿಸುವುದು.
  • ಪ್ರಯಾಣ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಪ್ರಾಧಿಕಾರದೊಂದಿಗೆ ಸಂಪರ್ಕಿಸಿ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸಹಕಾರ ಪಡೆಯುವುದು.
  • ಹಜ್ ಯಾತ್ರಿಗಳು ನೀಡುವು ದೂರುಗಳು/ಸಲಹೆಗಳನ್ನು ಪಡೆದು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಗಮನಕ್ಕೆ ತರುವುದು ಹಾಗೂ ಅದಕ್ಕಾಗಿ ಪರಿಹಾರ ಕಂಡುಕೊಳ್ಳಲು ಸಲಹೆ ನೀಡುವುದು.
  • ಹಜ್ ಯಾತ್ರೆಯಲ್ಲಿ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂಥಹ ಇತರೆ ಯಾವುದೇ ಕಾರ್ಯಗಳನ್ನು ಕೈಗೊಳ್ಳುವುದು.

ಕರ್ನಾಟಕ ರಾಜ್ಯ ಹಜ್ ಸಮಿತಿಯು ಹಜ್ ಯಾತ್ರೆ ಕೈಗೊಳ್ಳಲು ಇಚ್ಛಿಸುವವರಿಗೆ ಅರ್ಜಿಗಳನ್ನು ನೇರವಾಗಿ ಒದಗಿಸಲು ವ್ಯವಸ್ಥೆ ಮಾಡುವುದು (ಕೇಂದ್ರೀಯ ಹಜ್ ಸಮಿತಿ, ಮುಂಬೈ, ವಿತರಿಸುವವರು). ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಛೇರಿಗಳ ಹಾಗೂ ಪ್ರಮುಖ ಸ್ವಯಂ ಸೇವಾ ಸಂಘಗಳ ಮುಖಾಂತರ ಅರ್ಜಿಗಳನ್ನು ವಿತರಿಸಿ, ಅವರುಗಳು ಅರ್ಜಿ ಭರ್ತಿ ಮಾಡಿ ಸಲ್ಲಿಸುವವರೆಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುವುದು. ಅರ್ಜಿಗಳೊಂದಿಗೆ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿರುವ ಬಗ್ಗೆ ಪರೀಕ್ಷಿಸಿ ಆ ಅರ್ಜಿಗಳನ್ನು ಪಡೆದು ಮುಂಬೈನ ಕೇಂದ್ರೀಯ ಹಜ್ ಸಮಿತಿಗೆ ಸಲ್ಲಿಸುವ ವ್ಯವಸ್ಥೆ ಮಾಡುವುದು. ಕರ್ನಾಟಕ ರಾಜ್ಯ ಹಜ್ ಸಮಿತಿಯು ಹಜ್ ಯಾತ್ರಿಗಳು ಅರ್ಜಿ ಸಲ್ಲಿಸಿದ ನಂತರ ಅರ್ಜಿಗಳು ನೊಂದಾವಣೆ ಮಾಡಿಕೊಂಡಿರುವ ಬಗ್ಗೆ ಅವರಿಗೆ ಅಧಿಕೃತವಾಗಿ ಮಾಹಿತಿ ನೀಡುವುದು ಹಾಗೂ ಕೇಂದ್ರ ಸರ್ಕಾರದಿಂದ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಆಗಿಂದಾಗ್ಗೆ ನೀಡುವ ಸೂಚನೆಗಳು ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದು.